ನಮ್ಮ ಹೆಮ್ಮೆ ಪತ್ರಕರ್ತ ಬಂಧುಗಳೇ "ಕನ್ನಡವನ್ನು ಉಳಿಸ್ರಪ್ಪ"
ಇತ್ತೀಚಿಗೆ ಸುವರ್ಣ 24 * 7 ವಾಹಿನಿಯವರು ಸಚಿವರನ್ನು ಗುರಿಯಾಗಿಸಿ "ಇಂಗ್ಲೀಷ್" ಪ್ರಯೋಗ ಮಾಡಿಕೊಂಡು ಇಂಗ್ಲೀಷ್ ಬರದೇ ಇರುವವರನ್ನು ಇಕ್ಕಟ್ಟಿಗೆ ಸಿಲುಕಿಸುವ ಮಹತ್ಕಾರ್ಯವನ್ನು ಮಾಡಿ ತಮ್ಮ ಬೆನ್ನ ತಾವೇ ತಟ್ಟಿಕೊಳ್ಳುವ ಕೆಲಸಕ್ಕೆ ಹೊರಟಿದ್ದಾರೆ.
ನಮ್ಮ ಕರ್ನಾಟಕವನ್ನು ಅರ್ಧ ಭಾಗದಷ್ಟು ಜನ ಪರಭಾಷಿಕರು, ಆಕ್ರಮಿಸಿಕೊಂಡಿದ್ದಾರೆ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಕನ್ನಡ ಭಾಷೆಯೇ ಅಲ್ಪಸಂಖ್ಯಾತವಾಗುತ್ತಿದೆ. ಕೆಲವು ಕನ್ನಡಿಗರು ಕನ್ನಡದಲ್ಲಿ ಮಾತಾನಾಡಿದರೆ ಅವಮಾನ ಎಂಬ ನಿರ್ಧಾರ ಮಾಡಿಕೊಂಡು ಬಿಟ್ಟಿದ್ದಾರೆ. ಅಚ್ಚ ಕನ್ನಡಿಗರೇ, ತಮ್ಮ ಮನೆಗಳಲ್ಲಿ ತಮ್ಮ ಮನೆಯವರೊಂದಿಗೆ ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದಿದ್ದಾರೆ.
ಒಂದು ಕಡೆ ಪರಭಾಷಿಕರ ಹಾವಳಿಯಿಂದ ಕನ್ನಡ ಭಾಷೆ ನಲುಗಿಹೋಗುವಂತಹ ಪರಿಸ್ಥಿತಿ ಉಂಟಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಈ ರೀತಿಯ ಕನ್ನಡ ಭಾಷೆಯನ್ನು ಬಳಸಿಕೊಂಡು ಅವಹೇಳನ ಮಾಡಲು ಹೊರಟಿರುವುದು. ಬೇಸರ ತರುವಂತದ್ದು.
ರಾಜ್ಯ ವಾಳಲು, ದೇಶ ವಾಳಲು, ಇಂಗ್ಲೀಷ್ ಗೊತ್ತಿರಬೇಕು ಅನ್ನೋ ನಿಯಮವಿಲ್ಲ.
ಪ್ರಪಂಚದ ಚೀನಾ, ಜಪಾನ್, ಸ್ವಿಡ್ಜರ್ ಲಾಂಡ್ , ರಷ್ಯಾ, ಮುಂತಾದ ಎಷ್ಟೋ ಮುಂದುವರೆದ ದೇಶಗಳಲ್ಲಿ ತಮ್ಮ ಭಾಷೆಯನ್ನು ಬಿಟ್ಟರೆ ಬೇರೆ ಭಾಷೆ ಅವರಿಗೆ ತಿಳಿಯದು. ಇಂಗ್ಲೀಷ್ ಬಳಸುವುದಿಲ್ಲ. ಆದರೂ ಅವರು ದೇಶವಾಳುತ್ತಿಲ್ಲವೇ?
ಪಕ್ಕದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ತಮ್ಮ 50-60 ವರ್ಷ ರಾಜಕೀಯ ಜೀವನದಲ್ಲಿ ಒಮ್ಮೆಯೂ ಇಂಗ್ಲೀಷನ್ನು ಬಳಸಿಲ್ಲ. ಆದರೂ ರಾಜ್ಯವಾಳಲಿಲ್ಲವೇ?
ಮಾಧ್ಯಮಗಳು ಹೆಚ್ಚಿನ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಅದನ್ನು ಮರೆತು ಬೇಕಾಬಿಟ್ಟಿ ಕಾರ್ಯಕ್ರಮಗಳನ್ನು ಮಾಡಲು ಹೊರಟಿದ್ದಾರೆ.ತಾವು ಮಾಡಿದ್ದೇ ಸರಿ ಎಂಬ ಧೋರಣೆ ಯನ್ನು ಅನುಸರಿಸುತ್ತಿವೆ. ಈಗಾಗಲೇ ನಲುಗುತ್ತಿರುವ ಕನ್ನಡವನ್ನು ಇನ್ನಷ್ಟು ನಲುಗವಂತೆ ಮಾಡುತ್ತಿವೆ.
ವಾಹಿನಿಯ ಮಾಲೀಕರು ಪರಭಾಷಿಕರೇ ಆದರೂ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವವವರು ಎಲ್ಲರೂ ಕನ್ನಡದವರೇ ಆಗಿದ್ದರೂ ಕನ್ನಡ ಕಾಗುಣಿತದ ತಪ್ಪುಗಳು ಪ್ರತಿನಿತ್ಯವೂ ಆಗಿರುತ್ತದೆ. ಅದ ನ್ನು ಸರಿ ಮಾಡಿಕೊಳ್ಳಲಾಗದೇ ಇರುವವರಿಗೆ ಬೇರೆಯವರ ಸರ್ಕಾರದ ಅಂಕು ಡೊಂಕುಗಳನ್ನು ತೋರಿಸಲು ಹೊರಟಿದೆ.
ಹಿಂದೆ ಪರಬಾಷೆ ಯ ಚಿತ್ರಗಳ ಬಗ್ಗೆಯಾಗಲೀ, ಪರಭಾಷೆಯ ಚಿತ್ರಗಳನ್ನಾಗಲೀ ವಾಹಿನಿಗಳು ಪ್ರಸಾರ ಮಾಡಲು ಹಿಂಜರಿಯುತ್ತಿದ್ದವು. ಆದರೆ ಇತ್ತೀಚಿಗೆ ತೆಲುಗು, ತಮಿಳು, ಹಿಂದಿ ಚಿತ್ರಗಳ ಬಗ್ಗೆ ಅದ್ದೂರಿಯಾಗಿ ಪ್ರಸಾರ ವಾಗುತ್ತಿವೆ.
ತಮ್ಮ ಟಿ. ಆರ್. ಪಿ. ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ತಮ್ಮ ಜವಾಬ್ದಾರಿಯನ್ನು ಮರೆಯುವುದು. ಬೇಸರದ ಸಂಗತಿ ನಮ್ಮ ಕನ್ನಡಿಗರ ದೌರ್ಭಾಗ್ಯವೋ ಏನೋ?
ನಮ್ಮ ಕನ್ನಡ ಹೋರಾಟಗಾರರು ಇಂತಹ ವಿಷಯಗಳ ಬಗ್ಗೆ ಗಮನಹರಿಸುವುದಿಲ್ಲವೇ?
ದೇಶದಲ್ಲಿ, ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ.
ರಾಜು ವಿನಯ್ ದಾವಣಗೆರೆ
No comments:
Post a Comment